ಪ್ರಯತ್ನಕ್ಕೆ ದೊರೆತ ಫಲ..............
ತುಮಕೂರಿನ ಡಾ. ಎಸ್.ರಾಧಾಕೃಷ್ಣನ್ ರಸ್ತೆಯಲ್ಲಿರುವ ಸಾಲುಮರಗಳನ್ನು ಸಂರಕ್ಷಿಸಬೇಕೆಂದು ಕೋರಿ ರಾಜ್ಯ ಸರ್ಕಾರದ ವಿವಿಧ ಪ್ರಮುಖರಿಗೆ ಹಾಗೂ ಪ್ರಧಾನಮಂತ್ರಿಗಳ ಕಚೇರಿಗೆ ಮನವಿಪತ್ರವನ್ನು ಕಳುಹಿಸಿದ್ದೆ. ಆ ಎಲ್ಲ ಪ್ರಮುಖರಿಂದಲೂ ಸಕಾರಾತ್ಮಕವಾದ ಪ್ರತಿಕ್ರಿಯೆ ದೊರೆತಿತ್ತು. ಪತ್ರಗಳೂ ಬಂದಿದ್ದವು. ಅವೆಲ್ಲದರ ಪರಿಣಾಮವೋ ಎಂಬಂತೆ ಇದೀಗ ಸದರಿ ಮರಗಳನ್ನು ಕಡಿಯುವ ಬದಲಾಗಿ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಆದರೆ ಈ ಮರಗಳನ್ನು ಪಕ್ಕದ ಜೂನಿಯರ್ ಕಾಲೇಜು ಮೈದಾನದ ಬದಲು ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳವರಿಗೆ ಅವರ ವೆಚ್ಚದಲ್ಲೇ ಸ್ಥಳಾಂತರಿಸಬಹುದಿತ್ತು. ಅಥವಾ ಈಗ ತಿಪಟೂರು ಕಡೆಯಲ್ಲಿ ಹೆದ್ದಾರಿಯು ವಿಸ್ತಾರವಾಗುತ್ತಿರುವುದರಿಂದ ರಸ್ತೆ ಬದಿಗೆ ಸ್ಥಳಾಂತರಿಸಬಹುದಿತ್ತು ಎಂಬುದು ನನ್ನ ಅಭಿಪ್ರಾಯ........
ವಿಕೆ ನ್ಯೂಸ್ http://vknews.in/364517/
No comments:
Post a Comment