ತುಮಕೂರು ನಗರದ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಸಾರ್ವಜನಿಕ ಹಿತದೃಷ್ಟಿಯಿಂದ ವಿಶಿಷ್ಟ ರೀತಿಯಲ್ಲಿ ಕ್ರಿಯಾಶೀಲವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಅತ್ಯಂತ ರಚನಾತ್ಮಕವಾಗಿ, ವೈಧಾನಿಕವಾಗಿ, ಕ್ರಮಬದ್ಧವಾಗಿ ಧ್ವನಿಯಾಗುತ್ತಿದೆ. ವಿವಿಧ ಸಮಸ್ಯೆ ಹಾಗೂ ಸೌಲಭ್ಯಗಳ ಬಗ್ಗೆ ಮಾಧ್ಯಮಗಳ ಮೂಲಕ ಬೆಳಕು ಚೆಲ್ಲುವ ಮತ್ತು ಸರ್ಕಾರದ / ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು, ಜಿಲ್ಲಾಧಿಕಾರಿಗಳಿಂದ ಆರಂಭಿಸಿ, ಆಯಾ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳವರೆಗೆ ಮನವಿ ಪತ್ರಗಳನ್ನು ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ. ಆ ಬಗೆಗಿನ ನಮ್ಮ ಮನವಿ ಪತ್ರಗಳು ಮತ್ತು ಅದಕ್ಕೆ ದೊರೆತಿರುವ ಪ್ರತಿಕ್ರಿಯೆಗಳ ಮಾಹಿತಿ ಇಲ್ಲಿದೆ.
-ಆರ್.ವಿಶ್ವನಾಥನ್ , ಸರಸ್ ಮಾಧ್ಯಮ ಸಂಪರ್ಕ